Saturday, September 21, 2013

ಗುರುತು ( The Mark)



This story was written in the year 1999 - 2000 as student of Christ College for a competition by Kannada language association,later published in small stories series- Ebbani.Recently came across the book and felt nostalgic of those days..posting it here!!

ಪ್ರಾಚೀನ ಶ್ರೀಲಂಕಾದಲ್ಲಿ ಒಂದು ಬೌದ್ದ  ಆಶ್ರಮ ಇತ್ತು . ಆದರ ಮುಖ್ಯಸ್ಥನ ಹೆಸರು ಗುಣಶೇಕರ . ಅವನು ತನ್ನ ಒಳ್ಳೆ ಕೆಲಸದಿಂದ ಹೆಸರು ಮಾಡಿದ್ದನು. ಅವನ ಆಶ್ರಮದಲ್ಲಿ ಅನೇಕ ಸನ್ಯಾಸಿಗಳು ಅಭ್ಯಾಸ ಮಾಡುತ್ತಿದರು , ಅವರಲ್ಲಿ ಜಯಶೇಕರನು ಒಬ್ಬನು. ಆದರೆ  ಅವನು ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟಿರಲಿಲ್ಲ

ಅವನ ಪ್ರತಿಯೊಂದು ಕೆಟ್ಟ ಕೆಲಸಕ್ಕಾಗಿ ಗುಣಶೇಕರ  ಏನನ್ನೂ ಹೇಳದೆ , ಆಶ್ರಮದ ಒಂದು ಗೋಡೆಯಲ್ಲ್ಲಿ ಒಂದೊಂದು  ಮೊಳೆಯನ್ನು ಹೊಡೆಯತ್ತಿದನು . ಕೊನೆಯಲ್ಲಿ ಜಯಶೇಕರನ ಕೆಟ್ಟ ಕೆಲಸಗಳು ಮಿತಿಮೀರಿ  ಗೋಡೆಯ ತುಂಬಾ ಮೊಳೆಗಳು ತುಂಬಿದವು. ರಾಜನು ಪಾತಕಗಳನ್ನು ಕಂಡು ಜಯಶೇಕರನಿಗೆ  ಶಿಕ್ಷೆ ವಿಧಿಸಿದನು.

ಶಿಕ್ಷೆ ಮುಗಿದ ಮೇಲೆ ಜಯಶೇಕರ ಆಶ್ರಮಕ್ಕೆ ಬಂದನು. ಆಶ್ರಮದಲ್ಲಿ ಅವನ ಸ್ನೇಹಿತರು ಅವನಿಗೆ ಗೌರವ ಕೊಡಲಿಲ್ಲ, ತಿರಸ್ಕಾರದಿಂದ ನೋಡಿದರು. ಅವನಿಗೆ ಅವಮಾನವಾಗಿ ತನ್ನ ಗುರು ಬಳಿ ಬಂದನು. ಗುರು ಅವನನ್ನು ಪ್ರೀತಿಯಿಂದ ಮಾತನಾಡಿಸಿದನು, ಅವನ ಯೋಗಕ್ಷೇಮ ವಿಚಾರಿಸದನು. ಅವನ ಮನಸ್ಸಿನ ಬೇಸರವನ್ನು ಕಳೆಯಲು ಆಶ್ರಮವನ್ನು ಸುತ್ತಾಡಿಕೊಂಡು ಬರಲು ಹೋದರು. ಆಗ ಜಯಶೇಕರ ಆಶ್ರಮದ ಗೂಡೆಯನ್ನು ನೋಡಿ ಚಿಕಿತನಾದನು. ಅದನ್ನು ಕುರಿತು ಕೇಳಿದಾಗ, ಮೊಳೆಯನ್ನು ಹೊಡೆದ ಕಾರಣವನ್ನು ಹೇಳಿದನು. ಇದನ್ನು ಕೇಳಿ ಅವಮಾನಕೊಂಡ ಜಯಶೇಕರ , ಅಂದಿನಿಂದ ಒಳ್ಳೆಯ ಕೆಲಸಗಳನ್ನು ಮಾಡತೊಡಗಿದನು

ಜಯಶೇಕರನ ಒಳ್ಳೆಯ ಕೆಲಸಕ್ಕೆ ಪ್ರತಿಯಾಗಿ ಗುಣ ಶೇಕರನು ಗೋಡೆಯಿಂದ ಒಂದೊಂದು ಮೊಳೆಯನ್ನು ತೆಗಯತೊಡಗಿದನು. ಅವನ ಒಳ್ಳೆಯ ಕೆಲಸದಿಂದ ಬಹುಬೇಗ ಎಲ್ಲಾ ಮೊಳೆಗಳು ಹೊರಬಂದವು . ಇದನ್ನು ತಿಳಿದು ಜಯಶೇಕರ ಗೋಡೆಯನ್ನು ನೋಡಲು ಬಂದಾಗ, ಗೋಡೆಯಲ್ಲಿ ಮೊಳೆಯ ಗುರುತುನ್ನು ನೋಡಿದನು. ಇದನ್ನು ಕುರಿತು ಗುರುವನ್ನು ಕೇಳಿದಾಗ , ರೀತಿ ಹೇಳಿದನು "ಮನುಷ್ಯನು ಕೆಟ್ಟವನಾಗಿ ಮಾಡಿದ ಕೆಲಸಗಳ  ಗುರುತನ್ನು ಅವನ ಒಳ್ಳೆಯ ಕೆಲಸಗಳು ಅಳಿಸಲು ಸಾಧ್ಯವಿಲ್ಲ". ಇದನ್ನು ಕೇಳಿ ತಾನು ಮಾಡಿದ ಕೆಟ್ಟ ಕೆಲಸಗಳನ್ನು ಜ್ಞಾಪಿಸಿಕೊಂಡು  ಪಶ್ಚಾತಾಪಪಟ್ಟನು . ಮುಂದೆ ಒಳ್ಳೆಯ ಮನುಷ್ಯನಾಗಿ ಬಾಳಿ , ಬೌಧ್ಹ ಧರ್ಮವನ್ನು ಹರಡಿದ ಖ್ಯಾತಿ ಅವನದಾಯಿತು. 

No comments:

Post a Comment

Antenna, Signals and Corporate World

Part 1 The word TV antenna will make Indian kids of up to 90’s nostalgic and if you are one among them sure you will recall some of the be...